ಬುಧವಾರ, ಮಾರ್ಚ್ 2, 2022

ನಮ್ಮ ಸುಪ್ತ ಮನಸ್ಸಿನ ರೀಪ್ರೋಗ್ರಾಮಿಂಗ್ ನ ಸ್ವಯಂ ಸಲಹೆಗಳ ಪಂಚ ಸೂತ್ರಗಳು.

ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಮ್ಮ ಸುಪ್ತ ಮನಸ್ಸನ್ನು ರೀ ಪ್ರೋಗ್ರಾಮ್ ಮಾಡಲು ನಮಗೆ ಅವಶ್ಯವಿರುವ ಸ್ವಯಂ ಸಲಹೆಗಳ ಪಂಚ ಸೂತ್ರಗಳನ್ನು ಕಲಿತುಕೊಳ್ಳೋಣ.

1)ನಮ್ಮ ಸ್ವಯಂ ಸಲಹೆಗಳು ಆದಷ್ಟು ಸಕಾರಾತ್ಮಕವಾಗಿರಬೇಕು;
  ಅಂದ್ರೆ ಸ್ವಯಂ ಸಲಹೆಗಳನ್ನು ರಚಿಸುವಾಗ ನಮಗೆ ಏನು ಬೇಕೋ ಅದನ್ನು ಕೇಳಬೇಕು. ಯಾವಾಗಲೂ ನಮಗೆ ಏನು ಬೇಡವೋ ಅದನ್ನು ಹೇಳಬಾರದು.
ಉದಾಹರಣೆಗೆ 'ನನಗೆ ಯಾವುದೇ ರೋಗ ಬರಬಾರದು' ಎಂದು ಸುಪ್ತ ಮನಸ್ಸಿಗೆ ಹೇಳುವ ಬದಲು 'ನಾನು ಹೆಚ್ಚೆಚ್ಚು ಆರೋಗ್ಯವಾಗಿರಬೇಕು' ಎಂದು ಹೇಳಬೇಕು.ಬಹುಶಃ ನಿಮಗೆ ಈ ಉದಾಹರಣೆಯಿಂದ  ಸ್ವಯಂ ಸಲಹೆಗಳ ಮೊದಲನೇ ಸೂತ್ರ ಅರ್ಥವಾಗಿರುತ್ತದೆ ಎಂದು ಭಾವಿಸುತ್ತೇನೆ.
Ask what you want and not what you want to avoid.

2)ನಿಮ್ಮ ಫಾರ್ಮುಲೇಶನ್ಸ್ (suggestions)/ಸ್ವಯಂ ಸಲಹೆಗಳು ಪ್ರಗತಿಯನ್ನು ಸೂಚಿಸಬೇಕು;       Make your  formulations progressive.
ಉದಾಹರಣೆಗೆ 'ನಾನು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕೆಲಸ ಮಾಡುತ್ತಿದ್ದೇನೆ.'
ಇಲ್ಲಿ ದಿನದಿಂದ ದಿನಕ್ಕೆ ಎಂಬುದು ಪ್ರಗತಿಯನ್ನು ಸೂಚಿಸುತ್ತದೆ ಅಂದರೆ ಮುಂದುವರೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ.
ಇಲ್ಲಿ ಇನ್ನೊಂದು ಉದಾಹರಣೆಯನ್ನು ಗಮನಿಸೋಣ ; 'day by day in every way I am getting better and better.'
 ಸ್ವಯಂ ಸಲಹೆಗಳನ್ನು ವರ್ತಮಾನ ಕಾಲ ಅಥವಾ ಭವಿಷ್ಯತ್ಕಾಲ ದಲ್ಲಿ ಬಳಸುವುದಕ್ಕಿಂತ ಪ್ರಗತಿಯನ್ನು ಸೂಚಿಸುವಂತೆ ಬಳಸುವುದು ಹೆಚ್ಚು ಸೂಕ್ತ.
'ನಾನು ಒಂದೊಳ್ಳೆ ಉದ್ಯೋಗವನ್ನು ಪಡೆಯುತ್ತೇನೆ' ಎನ್ನುವುದಕ್ಕಿಂತ 'ನನಗೆ ಒಂದು ಒಳ್ಳೆ ಉದ್ಯೋಗ ಇದೆ' ಎಂಬುದು ಉತ್ತಮವಾಗಿದೆ ಆದರೆ ಇದರಲ್ಲಿರುವ ಸಮಸ್ಯೆಯೇನೆಂದರೆ ನಮಗೆ ಒಂದು ಒಳ್ಳೆ ಕೆಲಸ ಇಲ್ಲದಿರುವಾಗ ಈ ರೀತಿ ಹೇಳಿಕೊಳ್ಳುವುದರಿಂದ ಮಾನಸಿಕ ಗೊಂದಲ ಉಂಟಾಗುತ್ತದೆ. ಇದು ಸ್ವಯಂ ಸಮ್ಮೋಹನಕ್ಕೆ ಒಳಗಾಗುವವರನ್ನು ಅಧೈರ್ಯಗೊಳಿಸುತ್ತದೆ.ಆದ್ದರಿಂದ ಸಜೆಶನ್ಸ್ ಯಾವಾಗಲೂ ಪ್ರೋಗ್ರೆಸ್ಸಿವ್ ಆಗಿರಬೇಕು.
ಸ್ಥೂಲಕಾಯದ ಸಮಸ್ಯೆ ಇರುವ ವ್ಯಕ್ತಿಗಳು : 'ದಿನದಿಂದ ದಿನಕ್ಕೆ ನಾನು ಸಣ್ಣಗಾಗುತ್ತಿದ್ದೇನೆ.' ಅಥವಾ 'ನಾನು ಸ್ವಲ್ಪ ಸ್ವಲ್ಪವಾಗಿ ನನ್ನ ಆದರ್ಶ ತೂಕವನ್ನು ತಲುಪುತ್ತಿದ್ದೇನೆ' ಎಂದು ಹೇಳಬಹುದು.

ಅಥವಾ ನಮಗೆ ಬೇಕಾಗಿರುವುದನ್ನು ಒಂದೆರಡು ಪದಗಳಲ್ಲಿ ಹೇಳುವುದರಿಂದ ಮನಸ್ಸಿಗೆ ಉಂಟಾಗಬಹುದಾದ ಗೊಂದಲವನ್ನು ನೀಗಿಸಬಹುದು.ಅದು ಹೇಗೆಂದರೆ ಸ್ವಯಂ ಸಲಹೆಯಲ್ಲಿನ ಕ್ರಿಯಾಪದಗಳನ್ನು ಸಂಪೂರ್ಣವಾಗಿ ತೆಗೆದು ಹಾಕುವುದು. ಉದಾಹರಣೆಗೆ ಆರ್ಥಿಕ ತೊಂದರೆಯಲ್ಲಿ ಇರುವವರು ಕೇವಲ ಯಶಸ್ಸು- ಸಂಪತ್ತು ಎಂದು ಮನಸ್ಸಿನಲ್ಲಿಯೇ ಪುನರುಚ್ಚರಿಸುವುದರ ಮೂಲಕ ಅಭಿವೃದ್ಧಿಯನ್ನು ಸಾಧಿಸಬಹುದು.

3)ಸಜೆಶನ್ ಗಳು ಆದಷ್ಟು ಸಂಕ್ಷಿಪ್ತವಾಗಿ ಇರಲಿ.
      ನಾವು ಸ್ವಯಂ ಸಲಹೆಗಳನ್ನು ರಚಿಸುವಾಗ ಆದಷ್ಟು ಸಂಕ್ಷಿಪ್ತವಾಗಿ ನಮ್ಮ ಬಯಕೆಗಳನ್ನು ಹೇಳಬೇಕು.ಅಂದರೆ ಸಜೆಷನ್ ಗಳು ಆದಷ್ಟು ಕನಿಷ್ಠ ಪದಗಳನ್ನು ಹೊಂದಿರಬೇಕು.
'ನಾನು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಯಶಸ್ಸನ್ನು ಪಡೆಯುತ್ತಿದ್ದೇನೆ'

4)ಸರಳ ಮತ್ತು ಸ್ಪಷ್ಟ ಪದಗಳು ಇರಲಿ;
     ಸ್ನೇಹಿತರೆ ಅವು ಸ್ವಯಂ ಸಲಹೆಗಳನ್ನು ರಚಿಸುವಾಗ ನಮಗೆ ಹೆಚ್ಚು ಪರಿಚಿತವಾದ ಸರಳ ಪದಗಳನ್ನು ಬಳಸಿ ರಚಿಸಬೇಕು.ಆ ಪದಗಳು ನಮಗೆ ಯಾವುದೇ ಆಘಾತವನ್ನು ಉಂಟುಮಾಡಬಾರದು.

5)ಸ್ವಯಂ ಸಲಹೆಗಳಿಗೆ ಯಾವುದು ಉತ್ತಮ;ಪ್ರಥಮ ವ್ಯಕ್ತಿ ಅಥವಾ ದ್ವಿತೀಯ ವ್ಯಕ್ತಿ
  ಸ್ವಯಂ ಸಲಹೆಯಲ್ಲಿ 'ನಾನು' ಎಂದು ಬಳಸುವುದಾ ಅಥವಾ 'ನೀನು' ಎಂದು ಬಳಸುವುದಾ ಎಂದರೆ ಆಯ್ಕೆಯು ನಿಮ್ಮದಾಗಿದೆ.
ನೀವೇನಾದರೂ ಸ್ವಯಂ ಸಲಹೆಗಳನ್ನು ರೆಕಾರ್ಡ್ ಮಾಡಿಕೊಂಡು ಬಳಸುವುದಾದರೆ 'ನೀನು ' ಎಂದು ಬಳಸುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಸ್ವಯಂ ಸಮ್ಮೋಹನದ ಒಂದು ಅವಧಿಯಲ್ಲಿ ಒಂದು ಸ್ವಯಂ ಸಲಹೆ ಮಾತ್ರ ಇರಲಿ;
    ನಾವು ಸ್ವಯಂ ಸಂಮೋಹನದ ಸ್ಥಿತಿಯಲ್ಲಿ ಒಂದಕ್ಕಿಂತ ಹೆಚ್ಚು ಸ್ವಯಂ ಸಲಹೆಗಳನ್ನು ಬಳಸುವುದರಿಂದ ನಮ್ಮ ಸುಪ್ತ ಮನಸ್ಸಿಗೆ ಗೊಂದಲವನ್ನುಂಟು ಮಾಡುತ್ತೇವೆ.ಆದ್ದರಿಂದ ಸ್ವಯಂ ಸಮ್ಮೋಹನದ ಒಂದು ಅವಧಿಯಲ್ಲಿ ಕೇವಲ ಒಂದೇ ಒಂದು ಸ್ವಯಂ ಸಲಹೆಯನ್ನು ಪುನರುಚ್ಚರಿಸುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ.ಹಾಗೇನಾದ್ರೂ ನೀವು ಎರಡು ಸ್ವಯಂ ಸಲಹೆಗಳನ್ನು ಬಳಸಬೇಕೆಂದಿದ್ದಲ್ಲಿ ಮೊದಲು ಒಂದು ಸಾಮಾನ್ಯ(general) ಸ್ವಯಂ ಸಲಹೆಯನ್ನು ಬಳಸಿ ನಂತರ ಒಂದು ನಿರ್ದಿಷ್ಟ(specific ) ಸ್ವಯಂ ಸಲಹೆಯನ್ನು ಬಳಸಬಹುದು.

ಕೊನೆಯದಾಗಿ ಸ್ವಯಂ ಸಲಹೆಗಳ ಗೋಲ್ಡನ್ ರೂಲ್ ಎಂದರೆ ಅವುಗಳನ್ನು ಮತ್ತೆ ಮತ್ತೆ ಪುನರುಚ್ಚರಿಸುವುದು/ಪುನರಾವರ್ತಿಸುವುದು.

   ಇವುಗಳು ಸ್ವಯಂ ಸಲಹೆಗಳ ಪಂಚ ಸೂತ್ರಗಳಾಗಿವೆ.ಇವುಗಳನ್ನು ರಚಿಸುವಾಗ ಮೊದಲು ಬಿಳಿ ಹಾಳೆಯಲ್ಲಿ ಬರೆದು ನೋಡಬೇಕು.ಬರವಣಿಗೆಯಲ್ಲೇ ಸ್ವಯಂ ಸಲಹೆಗಳನ್ನು ಸುಧಾರಿಸಬೇಕು.ಅದರ ಬದಲು ಸಾಯಂ ಸಂಮೋಹನದ ಸ್ಥಿತಿಯಲ್ಲಿ ಸ್ವಯಂ ಸಲಹೆಗಳನ್ನು ಸುಧಾರಿಸಬಾರದು. You should not develop your suggestions while practicing self hypnosis.

ಕೇವಲ ಕೆಲವು ಪದಗಳು ನಿಮ್ಮ ಜೀವನವನ್ನು ಬದಲಿಸಬಲ್ಲದು.
ಸ್ವಯಂ ಸಲಹೆಗಳನ್ನು ಸ್ವಯಂ ಸಂಮೋಹನ ಸ್ಥಿತಿಯಲ್ಲಿ ಬಳಸಿದ ನಂತರ ನೀವು ಪದಗಳ ಬಲವನ್ನು ಅರ್ಥಮಾಡಿಕೊಳ್ಳುವಿರಿ..ಸ್ವಯಂ ಸಲಹೆಗಳನ್ನು ರಚಿಸುವುದು ಒಂದು ಕಲೆ. ಅದು ಈ ಮೇಲಿನ ನಿಯಮಗಳನ್ನು ಅನುಸರಿಸುತ್ತದೆ.ನಿಮಗೆ ಗೊತ್ತಿರುವಂತೆ ಈ ಐದು ಸೂತ್ರಗಳು ಅರ್ಥಮಾಡಿಕೊಳ್ಳಲು ಮತ್ತು ಅನ್ವಯಿಸಲು ತುಂಬಾ ಸರಳವಾಗಿವೆ.ಏನೇ ಆದರೂ ಎಲ್ಲಾ ಸ್ವಯಂ ಸಲಹೆಗಳು ಎಲ್ಲರಿಗೂ ಸರಿಹೊಂದುವುದಿಲ್ಲ.ಒಬ್ಬೊಬ್ಬರ ಅಭಿರುಚಿ, ಅವರ ಹಿನ್ನೆಲೆ, ವ್ಯಕ್ತಿತ್ವ ಇತ್ಯಾದಿಗಳಿಗೆ ಅನುಗುಣವಾಗಿ ಬೇರೆ ಬೇರೆ  ಸ್ವಯಂ ಸಲಹೆಗಳು ಸೂಕ್ತವಾಗುತ್ತವೆ.ಆದರೆ ಸ್ವಯಂ ಸಲಹೆಗಳು ಈ ಮೇಲಿನ ಐದು ಸೂತ್ರಗಳನ್ನು ಅನುಸರಿಸಿರುವುದು ಸೂಕ್ತವಾಗಿದೆ.

ಸೋಮವಾರ, ಫೆಬ್ರವರಿ 28, 2022

ಕೆಲವೇ ನಿಮಿಷಗಳಲ್ಲಿ ಸ್ವಯಂ ಸಂಮೋಹನ ಕಲಿಯಿರಿ.


ಸ್ನೇಹಿತರೆ ಈ ಲೇಖನವನ್ನು ಓದುವುದರ ಮುಖಾಂತರ ಕೆಲವೇ ನಿಮಿಷಗಳಲ್ಲಿ ಸ್ವಯಂ ಸಂಮೋಹನವನ್ನು ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೀರಿ.

ಸ್ವಯಂ ಸಮ್ಮೋಹನ ಸ್ಥಿತಿಯನ್ನು ತಲುಪುವುದು ಹೇಗೆ?ಸುಪ್ತ ಮನಸ್ಸಿನ ಸಂಪರ್ಕಕ್ಕೆ ಬರುವುದು ಹೇಗೆ?

ಮೊದಲಿಗೆ ಸಡಿಲವಾದ ಬಟ್ಟೆತೊಟ್ಟು ಅಂಗಾತನೆ ಮಲಗಿ.
ಈಗ ದಿಫರೆನ್ಸಿಯಲ್ ರಿಲ್ಯಾಕ್ಸೇಶನ್ (differential relaxation) ಮಾಡಬೇಕಾಗಿದೆ.ಏನಿದು ಡಿಫರೆನ್ಷಿಯಲ್ ರಿಲ್ಯಾಕ್ಸೇಶನ್?;
ಮೊದಲಿಗೆ ನಿಮ್ಮ ಮೂಗಿನ ಮೂಲಕ ನಿಧಾನವಾಗಿ ಗಾಳಿಯನ್ನು ಹೊರಹಾಕುತ್ತಾ ನಿಮ್ಮ ಕೈ ಮುಷ್ಟಿಯನ್ನು ಬಿಗಿ ಹಿಡಿಯಿರಿ.ನಿಮ್ಮ ಕೈ ಮುಷ್ಟಿಯನ್ನು ಹಿಸುಕುತ್ತಾ ನಿಮ್ಮ ಇಡೀ ಕೈಗಳನ್ನು ಬಿಗಿಮಾಡಿ, ಹೆಚ್ಚು ಹೆಚ್ಚು ಬಿಗಿಮಾಡಿ.ನಿಮ್ಮ ಕೈಯ ಮಾಂಸಖಂಡಗಳು ಕುಗ್ಗಲಿ, ಹೆಚ್ಚು ಹೆಚ್ಚು ಕುಗ್ಗಲಿ.
ಈಗ ನಿಧಾನವಾಗಿ ಗಾಳಿಯನ್ನು ಒಳಗೆಳೆದುಕೊಳ್ಳುತ್ತಾ ಕೈಗಳನ್ನು ವಿಶ್ರಮಿಸಿ ರಿಲ್ಯಾಕ್ಸ್ ಮಾಡಿ.
ಇದೇ ರೀತಿ  ನಾಲ್ಕು ಸಲ ಪುನರಾವರ್ತಿಸಿ.ಪ್ರತಿಸಲವೂ ನಿಮ್ಮ ಕೈ ಮುಷ್ಟಿಯನ್ನು ಬಿಗಿ ಮಾಡುತ್ತಾ ನಿಮ್ಮ ಕೈಯ ಮಾಂಸಖಂಡಗಳ ಮೇಲೆ ಹೆಚ್ಚು ಹೆಚ್ಚು ಒತ್ತಡ ಹೇರಿ.ನಿಮ್ಮ ಎಲ್ಲಾ ಬಲಪ್ರಯೋಗ ಮಾಡಿ ಕೈಗಳ ಮೇಲೆ ಒತ್ತಡ ಹೇರಿ.
ನೀವು ಕೊನೆಯದಾಗಿ ಇದನ್ನು ಪುನರಾವರ್ತಿಸುವಾಗ ನಿಮ್ಮ ಕೈಗಳು ಒತ್ತಡದಿಂದ ನಡುಗುತ್ತಿರಬೇಕು.
ಒತ್ತಡ ಹೇರಿ ಕುಗ್ಗಿಸುವ ಪ್ರತಿಸಲವೂ ಗಾಳಿಯನ್ನು ಒಳಗೆಳೆದುಕೊಳ್ಳುತ್ತಾ ವಿಶ್ರಮಿಸಿ.
ಕೊನೆಯ ಸಲ ನಿಮ್ಮ ಕೈಗಳನ್ನು ಪೂರ್ಣವಾಗಿ ವಿಶ್ರಮಿಸಿ, ರಿಲಾಕ್ಸ್ .ನಿಮ್ಮ ಕೈಗಳಲ್ಲಿ ರಕ್ತವು ಪ್ರವಹಿಸುವುದನ್ನು ಫೀಲ್ ಮಾಡಿ. ಕೈಗಳಲ್ಲಿ
ನಿಮ್ಮ ರಕ್ತದ ಶಾಖವನ್ನು ಫೀಲ್ ಮಾಡಿ.ನಿಮ್ಮ ಕೈಗಳು ಭಾರವಾಗುತ್ತದೆ. ಗುರುತ್ವಾಕರ್ಷಣೆಯು ನಿಮ್ಮ ಕೈಗಳನ್ನು ಕೆಳಗೆಳೆಯುತ್ತದೆ.ನಿಮ್ಮ ಕೈಗಳು ಒತ್ತಡದಿಂದ, ಕುಗ್ಗುವಿಕೆಯಿಂದ ಚೇತರಿಸಿಕೊಳ್ಳುತ್ತಿರುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ.

ಈಗ ಇದೇ ರೀತಿ ನಿಮ್ಮ ಪಾದಗಳು,ಮೀನ ಖಂಡಗಳು, ಮಂಡಿಗಳು, ತೊಡೆಗಳು ಸೇರಿದಂತೆ ಇಡೀ ಕಾಲುಗಳನ್ನು ದಿಫರೆನ್ಸಿಯಲ್ ರಿಲ್ಯಾಕ್ಸೇಶನ್ ಗೆ ಒಳಪಡಿಸಿ.ಗಾಳಿಯನ್ನು ಹೊರಹಾಕುತ್ತಾ ನಿಮ್ಮ ಕಾಲಿನ ಮಾಂಸಖಂಡಗಳನ್ನು ನಿಮ್ಮೆಲ್ಲ ಬಲ ಪ್ರಯೋಗವನ್ನು ಮಾಡಿ ಕುಗ್ಗಿಸಿ, ಒತ್ತಡ ಹೇರಿ.
ನಂತರ   ಗಾಳಿಯನ್ನು ಒಳಗೆಳೆದುಕೊಳ್ಳುತ್ತಾ ಸಂಪೂರ್ಣವಾಗಿ ಕಾಲುಗಳನ್ನು ವಿಶ್ರಮಿಸಿ.ಕೈಗಳಿಗೆ ಮಾಡಿದಂತೆ ಕಾಲುಗಳಿಗೂ ಮಾಡಿ.
ಇದೇ ರೀತಿ ನಿಮ್ಮ ಸೊಂಟದ ಭಾಗ, ಹೊಟ್ಟೆ, ಎದೆ, ಕುತ್ತಿಗೆ, ಮುಖ, ತಲೆಯ ಹಿಂಭಾಗ ಗಳಿಗೆ ದಿಫರೆನ್ಸಿಯಲ್ ರಿಲ್ಯಾಕ್ಸೇಶನ್ ಅನ್ನು ಮುಂದುವರಿಸಿ.

ಡಿಫರೆನ್ಷಿಯಲ್ ರಿಲ್ಯಾಕ್ಸೇಶನ್ ಅನ್ನು ಮುಗಿಸಿದ ನಂತರ 'ಅಬ್ದೋಮಿನಲ್ ಬ್ರೀತಿಂಗ್' (abdominal breathing) ಅನ್ನು ಮಾಡಬೇಕು.
ಅಬ್ದೋಮಿನಲ್ ಬ್ರೀತಿಂಗ್ ಮಾಡುವುದು ಹೇಗೆ?
ನಿಧಾನವಾಗಿ ಗಾಳಿಯನ್ನು ಮೂಗಿನ ಮುಖಾಂತರ ಒಳಗೆಳೆದುಕೊಳ್ಳಿ.ಗಾಳಿಯು ನಿಮ್ಮ ಹೊಟ್ಟೆ ಭಾಗದಲ್ಲಿ ತುಂಬಿಕೊಳ್ಳುವಂತೆ ಭಾಸವಾಗಲಿ.ನಿಮ್ಮ ಅಬ್ದೋಮೆನ್(abdomen) ಉಬ್ಬಲಿ.
ನೀವು ಗಾಳಿಯನ್ನು ನಿಧಾನವಾಗಿ ಹೊರಹಾಕುವಾಗ ನಿಮ್ಮ ಅಬ್ದೋಮೆನ್ ಕುಗ್ಗಲಿ.
ಇದನ್ನು ಅಬ್ದೋಮಿನಲ್ ಬ್ರೀತಿಂಗ್ ಎನ್ನುತ್ತೇವೆ.
ಇದನ್ನು ಏಕಾಗ್ರತೆಯಿಂದ ನಿಮಗೆ ಆಗುವಷ್ಟು ಸಲ ಅಂದರೆ 6 ರಿಂದ 20 ಬಾರಿ ಮಾಡಿ.

ನಂತರ ocular interruption ಮಾಡಿ.
ಏನಿದು ಓಕುಲಾರ್ ಇಂಟ್ರಪ್ಷನ್?
ಅಂದರೆ ನಿಮಗೆ ನೀವೇ ಈ ಕೆಳಗಿನಂತೆ ಹೇಳಿಕೊಳ್ಳಿ;
ನನ್ನ ಕಣ್ರೆಪ್ಪೆಗಳು ಭಾರವಾಗುತ್ತಿವೆ,ಹೆಚ್ಚೆಚ್ಚು ಭಾರವಾಗುತ್ತಿವೆ.ಶೀಘ್ರವೇ ನಾನು ಅವುಗಳನ್ನು ತಡೆಯಲಾರದಷ್ಟು ಭಾರವಾಗುತ್ತವೆ.ನಾನು ಆದಷ್ಟು ಬೇಗ ಸ್ವಯಂ ಸಮ್ಮೋಹನ ಸ್ಥಿತಿಯನ್ನು ತಲುಪುತ್ತೇನೆ.ನಾನೀಗ ಹತ್ತರಿಂದ 0 ವರೆಗೆ ನಿಧಾನವಾಗಿ, ತುಂಬಾ ನಿಧಾನವಾಗಿ ಎಣಿಸುತ್ತೇನೆ.ನಾನು ಎಣಿಸುತ್ತಿದ್ದಂತೆ ನನ್ನ ಕಣ್ರೆಪ್ಪೆಗಳು ಹೆಚ್ಚೆಚ್ಚು ಭಾರವಾಗುತ್ತವೆ.
ನಾನು ಸೊನ್ನೆಯನ್ನು ಎಣಿಸುತ್ತಿದ್ದಂತೆ ನನ್ನ ಕಣ್ರೆಪ್ಪೆಗಳು ತೆರೆಯಲಾರದಷ್ಟು ಭಾರವಾಗಿರುತ್ತವೆ.ನಾನು ಸ್ವಯಂ ಸಂಮೋಹನ ಸ್ಥಿತಿಯನ್ನು ತಲುಪಿರುತ್ತೇನೆ.
ನಾನೀಗ ಎಣಿಸುತ್ತಿದ್ದೇನೆ,10....9...ನನ್ನ ಕಣ್ರೆಪ್ಪೆಗಳು ಭಾರವಾಗುತ್ತಿವೆ....8....7.....6 ....ನನ್ನ ಕಣ್ರೆಪ್ಪೆಗಳು ಹೆಚ್ಚೆಚ್ಚು ಭಾರವಾಗುತ್ತಿವೆ....5....4.... 3..... 2.... 1.... 1 ...... 0 ಈಗ ನನ್ ಕಣ್ರೆಪ್ಪೆಗಳು ಹೆಚ್ಚು ಭಾರವಾಗಿದೆ ನಾನು ಕಣ್ತೆರೆಯಲು ಆಗದಷ್ಟು ಭಾರವಾಗಿದೆ.

ಈಗ ನಿಧಾನವಾಗಿ ಕಣ್ತೆರೆಯಲು ಪ್ರಯತ್ನಿಸಿ.ನಿಮ್ಮಿಂದ ಕಣ್ತೆರೆಯಲು ಸಾಧ್ಯವಾಗದಿದ್ದರೆ, ನಿಮಗೆ ಅಭಿನಂದನೆಗಳು.ನೀವು ಸ್ವಯಂ ಸಂಮೋಹನ ಸ್ಥಿತಿಯನ್ನು ತಲುಪಿದ್ದೀರಿ.
ಇದು ನಿಮ್ಮ ಮೊದಲ ಪ್ರಯತ್ನವಾದರೆ ನೀವು ಒಬ್ಬ  ಅಸಾಧಾರಣ ವ್ಯಕ್ತಿ.
ಆದರೆ ನೀವು ಇದರಲ್ಲಿ ಯಶಸ್ಸು ಗಳಿಸದಿದ್ದರೆ
ಡೋಂಟ್ ವರಿ.ಇದು ಸಂಪೂರ್ಣವಾಗಿ ಸಹಜ.
ಮುಂದಿನ ಕೆಲವೇ ಪ್ರಯತ್ನಗಳಲ್ಲಿ ನೀವು ಇದನ್ನು ಸಾಧಿಸುತ್ತೀರಿ.

ಈಗ ನಿಮ್ಮ ಪೂರ್ವಯೋಜಿತ ಸ್ವಯಂ ಹೇಳಿಕೆಗಳನ್ನು ಅಂದರೆ  ಸಜೆಷನ್(suggestions) ಗಳನ್ನು ಮನಸ್ಸಿನಲ್ಲಿಯೇ ಪುನರಾವರ್ತಿಸಿ.ಹೀಗೆ ನಿಮ್ಮ ಸುಪ್ತ ಮನಸ್ಸನ್ನು ಪ್ರೋಗ್ರಾಮ್ ಮಾಡಿ.

ಈಗ ಸ್ವಯಂ ಸಮ್ಮೋಹನ ಸ್ಥಿತಿಯಿಂದ ಹೊರ ಬರುವ ಸಮಯ.
ಇದನ್ನು ಮಾಡಲು ಮನಸ್ಸಿನಲ್ಲಿಯೇ ಒಂದರಿಂದ ಐದರ ವರೆಗೆ ಎಣಿಸಿ.ನಾನು ಐದನ್ನು ಎಣಿಸುವಾಗ ಸ್ವಯಂ ಸಮ್ಮೋಹನ ಸ್ಥಿತಿಯಿಂದ ಹೊರಬರುತ್ತೇನೆ ಎಂದು ನಿಮಗೆ ನೀವೇ ಹೇಳಿಕೊಳ್ಳಿ.
ತದನಂತರ ಕೈಕಾಲುಗಳನ್ನು ನಿಧಾನವಾಗಿ ಅಲುಗಾಡಿಸಿ.ಈಗ ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ.ಧನ್ಯವಾದಗಳು.

ನಮ್ಮ ಸುಪ್ತ ಮನಸ್ಸಿನ ರೀಪ್ರೋಗ್ರಾಮಿಂಗ್ ನ ಸ್ವಯಂ ಸಲಹೆಗಳ ಪಂಚ ಸೂತ್ರಗಳು.

ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಮ್ಮ ಸುಪ್ತ ಮನಸ್ಸನ್ನು ರೀ ಪ್ರೋಗ್ರಾಮ್ ಮಾಡಲು ನಮಗೆ ಅವಶ್ಯವಿರುವ ಸ್ವಯಂ ಸಲಹೆಗಳ ಪಂಚ ಸೂತ್ರಗಳನ್ನು ಕಲಿತುಕೊಳ್ಳೋಣ. 1)ನಮ್ಮ ಸ...