ಸ್ವಯಂ ಸಮ್ಮೋಹನ ಸ್ಥಿತಿಯನ್ನು ತಲುಪುವುದು ಹೇಗೆ?ಸುಪ್ತ ಮನಸ್ಸಿನ ಸಂಪರ್ಕಕ್ಕೆ ಬರುವುದು ಹೇಗೆ?
ಮೊದಲಿಗೆ ಸಡಿಲವಾದ ಬಟ್ಟೆತೊಟ್ಟು ಅಂಗಾತನೆ ಮಲಗಿ.
ಈಗ ದಿಫರೆನ್ಸಿಯಲ್ ರಿಲ್ಯಾಕ್ಸೇಶನ್ (differential relaxation) ಮಾಡಬೇಕಾಗಿದೆ.ಏನಿದು ಡಿಫರೆನ್ಷಿಯಲ್ ರಿಲ್ಯಾಕ್ಸೇಶನ್?;
ಮೊದಲಿಗೆ ನಿಮ್ಮ ಮೂಗಿನ ಮೂಲಕ ನಿಧಾನವಾಗಿ ಗಾಳಿಯನ್ನು ಹೊರಹಾಕುತ್ತಾ ನಿಮ್ಮ ಕೈ ಮುಷ್ಟಿಯನ್ನು ಬಿಗಿ ಹಿಡಿಯಿರಿ.ನಿಮ್ಮ ಕೈ ಮುಷ್ಟಿಯನ್ನು ಹಿಸುಕುತ್ತಾ ನಿಮ್ಮ ಇಡೀ ಕೈಗಳನ್ನು ಬಿಗಿಮಾಡಿ, ಹೆಚ್ಚು ಹೆಚ್ಚು ಬಿಗಿಮಾಡಿ.ನಿಮ್ಮ ಕೈಯ ಮಾಂಸಖಂಡಗಳು ಕುಗ್ಗಲಿ, ಹೆಚ್ಚು ಹೆಚ್ಚು ಕುಗ್ಗಲಿ.
ಈಗ ನಿಧಾನವಾಗಿ ಗಾಳಿಯನ್ನು ಒಳಗೆಳೆದುಕೊಳ್ಳುತ್ತಾ ಕೈಗಳನ್ನು ವಿಶ್ರಮಿಸಿ ರಿಲ್ಯಾಕ್ಸ್ ಮಾಡಿ.
ಇದೇ ರೀತಿ ನಾಲ್ಕು ಸಲ ಪುನರಾವರ್ತಿಸಿ.ಪ್ರತಿಸಲವೂ ನಿಮ್ಮ ಕೈ ಮುಷ್ಟಿಯನ್ನು ಬಿಗಿ ಮಾಡುತ್ತಾ ನಿಮ್ಮ ಕೈಯ ಮಾಂಸಖಂಡಗಳ ಮೇಲೆ ಹೆಚ್ಚು ಹೆಚ್ಚು ಒತ್ತಡ ಹೇರಿ.ನಿಮ್ಮ ಎಲ್ಲಾ ಬಲಪ್ರಯೋಗ ಮಾಡಿ ಕೈಗಳ ಮೇಲೆ ಒತ್ತಡ ಹೇರಿ.
ನೀವು ಕೊನೆಯದಾಗಿ ಇದನ್ನು ಪುನರಾವರ್ತಿಸುವಾಗ ನಿಮ್ಮ ಕೈಗಳು ಒತ್ತಡದಿಂದ ನಡುಗುತ್ತಿರಬೇಕು.
ಒತ್ತಡ ಹೇರಿ ಕುಗ್ಗಿಸುವ ಪ್ರತಿಸಲವೂ ಗಾಳಿಯನ್ನು ಒಳಗೆಳೆದುಕೊಳ್ಳುತ್ತಾ ವಿಶ್ರಮಿಸಿ.
ಕೊನೆಯ ಸಲ ನಿಮ್ಮ ಕೈಗಳನ್ನು ಪೂರ್ಣವಾಗಿ ವಿಶ್ರಮಿಸಿ, ರಿಲಾಕ್ಸ್ .ನಿಮ್ಮ ಕೈಗಳಲ್ಲಿ ರಕ್ತವು ಪ್ರವಹಿಸುವುದನ್ನು ಫೀಲ್ ಮಾಡಿ. ಕೈಗಳಲ್ಲಿ
ನಿಮ್ಮ ರಕ್ತದ ಶಾಖವನ್ನು ಫೀಲ್ ಮಾಡಿ.ನಿಮ್ಮ ಕೈಗಳು ಭಾರವಾಗುತ್ತದೆ. ಗುರುತ್ವಾಕರ್ಷಣೆಯು ನಿಮ್ಮ ಕೈಗಳನ್ನು ಕೆಳಗೆಳೆಯುತ್ತದೆ.ನಿಮ್ಮ ಕೈಗಳು ಒತ್ತಡದಿಂದ, ಕುಗ್ಗುವಿಕೆಯಿಂದ ಚೇತರಿಸಿಕೊಳ್ಳುತ್ತಿರುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ.
ಈಗ ಇದೇ ರೀತಿ ನಿಮ್ಮ ಪಾದಗಳು,ಮೀನ ಖಂಡಗಳು, ಮಂಡಿಗಳು, ತೊಡೆಗಳು ಸೇರಿದಂತೆ ಇಡೀ ಕಾಲುಗಳನ್ನು ದಿಫರೆನ್ಸಿಯಲ್ ರಿಲ್ಯಾಕ್ಸೇಶನ್ ಗೆ ಒಳಪಡಿಸಿ.ಗಾಳಿಯನ್ನು ಹೊರಹಾಕುತ್ತಾ ನಿಮ್ಮ ಕಾಲಿನ ಮಾಂಸಖಂಡಗಳನ್ನು ನಿಮ್ಮೆಲ್ಲ ಬಲ ಪ್ರಯೋಗವನ್ನು ಮಾಡಿ ಕುಗ್ಗಿಸಿ, ಒತ್ತಡ ಹೇರಿ.
ನಂತರ ಗಾಳಿಯನ್ನು ಒಳಗೆಳೆದುಕೊಳ್ಳುತ್ತಾ ಸಂಪೂರ್ಣವಾಗಿ ಕಾಲುಗಳನ್ನು ವಿಶ್ರಮಿಸಿ.ಕೈಗಳಿಗೆ ಮಾಡಿದಂತೆ ಕಾಲುಗಳಿಗೂ ಮಾಡಿ.
ಇದೇ ರೀತಿ ನಿಮ್ಮ ಸೊಂಟದ ಭಾಗ, ಹೊಟ್ಟೆ, ಎದೆ, ಕುತ್ತಿಗೆ, ಮುಖ, ತಲೆಯ ಹಿಂಭಾಗ ಗಳಿಗೆ ದಿಫರೆನ್ಸಿಯಲ್ ರಿಲ್ಯಾಕ್ಸೇಶನ್ ಅನ್ನು ಮುಂದುವರಿಸಿ.
ಡಿಫರೆನ್ಷಿಯಲ್ ರಿಲ್ಯಾಕ್ಸೇಶನ್ ಅನ್ನು ಮುಗಿಸಿದ ನಂತರ 'ಅಬ್ದೋಮಿನಲ್ ಬ್ರೀತಿಂಗ್' (abdominal breathing) ಅನ್ನು ಮಾಡಬೇಕು.
ಅಬ್ದೋಮಿನಲ್ ಬ್ರೀತಿಂಗ್ ಮಾಡುವುದು ಹೇಗೆ?
ನಿಧಾನವಾಗಿ ಗಾಳಿಯನ್ನು ಮೂಗಿನ ಮುಖಾಂತರ ಒಳಗೆಳೆದುಕೊಳ್ಳಿ.ಗಾಳಿಯು ನಿಮ್ಮ ಹೊಟ್ಟೆ ಭಾಗದಲ್ಲಿ ತುಂಬಿಕೊಳ್ಳುವಂತೆ ಭಾಸವಾಗಲಿ.ನಿಮ್ಮ ಅಬ್ದೋಮೆನ್(abdomen) ಉಬ್ಬಲಿ.
ನೀವು ಗಾಳಿಯನ್ನು ನಿಧಾನವಾಗಿ ಹೊರಹಾಕುವಾಗ ನಿಮ್ಮ ಅಬ್ದೋಮೆನ್ ಕುಗ್ಗಲಿ.
ಇದನ್ನು ಅಬ್ದೋಮಿನಲ್ ಬ್ರೀತಿಂಗ್ ಎನ್ನುತ್ತೇವೆ.
ಇದನ್ನು ಏಕಾಗ್ರತೆಯಿಂದ ನಿಮಗೆ ಆಗುವಷ್ಟು ಸಲ ಅಂದರೆ 6 ರಿಂದ 20 ಬಾರಿ ಮಾಡಿ.
ನಂತರ ocular interruption ಮಾಡಿ.
ಏನಿದು ಓಕುಲಾರ್ ಇಂಟ್ರಪ್ಷನ್?
ಅಂದರೆ ನಿಮಗೆ ನೀವೇ ಈ ಕೆಳಗಿನಂತೆ ಹೇಳಿಕೊಳ್ಳಿ;
ನನ್ನ ಕಣ್ರೆಪ್ಪೆಗಳು ಭಾರವಾಗುತ್ತಿವೆ,ಹೆಚ್ಚೆಚ್ಚು ಭಾರವಾಗುತ್ತಿವೆ.ಶೀಘ್ರವೇ ನಾನು ಅವುಗಳನ್ನು ತಡೆಯಲಾರದಷ್ಟು ಭಾರವಾಗುತ್ತವೆ.ನಾನು ಆದಷ್ಟು ಬೇಗ ಸ್ವಯಂ ಸಮ್ಮೋಹನ ಸ್ಥಿತಿಯನ್ನು ತಲುಪುತ್ತೇನೆ.ನಾನೀಗ ಹತ್ತರಿಂದ 0 ವರೆಗೆ ನಿಧಾನವಾಗಿ, ತುಂಬಾ ನಿಧಾನವಾಗಿ ಎಣಿಸುತ್ತೇನೆ.ನಾನು ಎಣಿಸುತ್ತಿದ್ದಂತೆ ನನ್ನ ಕಣ್ರೆಪ್ಪೆಗಳು ಹೆಚ್ಚೆಚ್ಚು ಭಾರವಾಗುತ್ತವೆ.
ನಾನು ಸೊನ್ನೆಯನ್ನು ಎಣಿಸುತ್ತಿದ್ದಂತೆ ನನ್ನ ಕಣ್ರೆಪ್ಪೆಗಳು ತೆರೆಯಲಾರದಷ್ಟು ಭಾರವಾಗಿರುತ್ತವೆ.ನಾನು ಸ್ವಯಂ ಸಂಮೋಹನ ಸ್ಥಿತಿಯನ್ನು ತಲುಪಿರುತ್ತೇನೆ.
ನಾನೀಗ ಎಣಿಸುತ್ತಿದ್ದೇನೆ,10....9...ನನ್ನ ಕಣ್ರೆಪ್ಪೆಗಳು ಭಾರವಾಗುತ್ತಿವೆ....8....7.....6 ....ನನ್ನ ಕಣ್ರೆಪ್ಪೆಗಳು ಹೆಚ್ಚೆಚ್ಚು ಭಾರವಾಗುತ್ತಿವೆ....5....4.... 3..... 2.... 1.... 1 ...... 0 ಈಗ ನನ್ ಕಣ್ರೆಪ್ಪೆಗಳು ಹೆಚ್ಚು ಭಾರವಾಗಿದೆ ನಾನು ಕಣ್ತೆರೆಯಲು ಆಗದಷ್ಟು ಭಾರವಾಗಿದೆ.
ಈಗ ನಿಧಾನವಾಗಿ ಕಣ್ತೆರೆಯಲು ಪ್ರಯತ್ನಿಸಿ.ನಿಮ್ಮಿಂದ ಕಣ್ತೆರೆಯಲು ಸಾಧ್ಯವಾಗದಿದ್ದರೆ, ನಿಮಗೆ ಅಭಿನಂದನೆಗಳು.ನೀವು ಸ್ವಯಂ ಸಂಮೋಹನ ಸ್ಥಿತಿಯನ್ನು ತಲುಪಿದ್ದೀರಿ.
ಇದು ನಿಮ್ಮ ಮೊದಲ ಪ್ರಯತ್ನವಾದರೆ ನೀವು ಒಬ್ಬ ಅಸಾಧಾರಣ ವ್ಯಕ್ತಿ.
ಆದರೆ ನೀವು ಇದರಲ್ಲಿ ಯಶಸ್ಸು ಗಳಿಸದಿದ್ದರೆ
ಡೋಂಟ್ ವರಿ.ಇದು ಸಂಪೂರ್ಣವಾಗಿ ಸಹಜ.
ಮುಂದಿನ ಕೆಲವೇ ಪ್ರಯತ್ನಗಳಲ್ಲಿ ನೀವು ಇದನ್ನು ಸಾಧಿಸುತ್ತೀರಿ.
ಈಗ ನಿಮ್ಮ ಪೂರ್ವಯೋಜಿತ ಸ್ವಯಂ ಹೇಳಿಕೆಗಳನ್ನು ಅಂದರೆ ಸಜೆಷನ್(suggestions) ಗಳನ್ನು ಮನಸ್ಸಿನಲ್ಲಿಯೇ ಪುನರಾವರ್ತಿಸಿ.ಹೀಗೆ ನಿಮ್ಮ ಸುಪ್ತ ಮನಸ್ಸನ್ನು ಪ್ರೋಗ್ರಾಮ್ ಮಾಡಿ.
ಈಗ ಸ್ವಯಂ ಸಮ್ಮೋಹನ ಸ್ಥಿತಿಯಿಂದ ಹೊರ ಬರುವ ಸಮಯ.
ಇದನ್ನು ಮಾಡಲು ಮನಸ್ಸಿನಲ್ಲಿಯೇ ಒಂದರಿಂದ ಐದರ ವರೆಗೆ ಎಣಿಸಿ.ನಾನು ಐದನ್ನು ಎಣಿಸುವಾಗ ಸ್ವಯಂ ಸಮ್ಮೋಹನ ಸ್ಥಿತಿಯಿಂದ ಹೊರಬರುತ್ತೇನೆ ಎಂದು ನಿಮಗೆ ನೀವೇ ಹೇಳಿಕೊಳ್ಳಿ.
ತದನಂತರ ಕೈಕಾಲುಗಳನ್ನು ನಿಧಾನವಾಗಿ ಅಲುಗಾಡಿಸಿ.ಈಗ ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ.ಧನ್ಯವಾದಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ